City Municipal Council, Udupi
Town
Municipal
Council,Udupi came into existence in 1935 and was converted into City
Municipal Council in the year 1995.Udupi city
is district headquarter for the
district of same name.Udupi is new district formed
separated from Dakshina Kannada district in 1997.Udupi consist
of 1,13,039 population according to the 2001 census has 68.23
Sq.K.M. area
for it's municipal limit. The well-established main office of Municipality is
situated in K.M.Marg at the heart of the city.
ಉಡುಪಿ ನಗರಸಭೆಯು ರಾಜ್ಯದಲ್ಲಿಯೇ
ಅತ್ಯಂತ ಪುರಾತನವಾದ ನಗರಸಭೆಯಾಗಿದೆ. ಬ್ರಿಟಿಷ್ ಕಾಲದಲ್ಲಿಯೇ ನಗರಸಭೆ
ರೂಪುಗೊಂಡಿತ್ತು. 01-04-1935 ರಂದು ತಾಲೂಕು ಬೋರ್ಡ್ ವಿಸರ್ಜನೆಗೊಂಡು ಜಿಲ್ಲಾ
ಬೋರ್ಡ್ ರಚನೆಯಾದ ನಂತರ ಉಡುಪಿಯ ರಸ್ತೆ ಬೀದಿದೀಪ, ಸ್ವಚ್ಛತೆಯ ದೃಷ್ಟಿಯಿಂದ
ಶ್ರೀಕೃಷ್ಣ ದೇವಸ್ಥಾನದಿಂದಾಗಿ ಪ್ರಸಿದ್ಧ ಯಾತ್ರಾ ಸ್ಥಳವಾದ್ದರಿಂದ ಅಂದಿನ
ಮದ್ರಾಸ್ ಸರ್ಕಾರ 01-11-1935 ರಿಂದ ನಗರಸಭೆ ರಚನೆಯ ಘೋಷಣೆಯನ್ನು ಪ್ರಕಟಿಸಿತು.
01-11-1935 ರಂದು ಏಳು ಗ್ರಾಮಗಳ ಭಾಗಗಳನ್ನೊಳಗೊಂಡು ಸುಮಾರು 17,251
ಜನಸಂಖ್ಯೆಯೊಂದಿಗ
3.75 ಚದರ ಮೈಲು ಪ್ರದೇಶದಲ್ಲಿ
ನಗರಸಭೆ ಅಸ್ತಿತ್ವಕ್ಕೆ ಬಂದಿತು. ಪ್ರಥಮ ಚುನಾಯಿತ ಮಂಡಳಿ 31-08-1936 ರಂದು
ಉಡುಪಿ ನಗರದ ಗಣ್ಯರು ಸುಪ್ರಸಿದ್ಧ ವಕೀಲರೂ ಆಗಿದ್ದ ಶ್ರೀ ಆರೂರು ಲಕ್ಷ್ಮೀನಾರಾಯಣ
ರಾವ್ ರವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿತು.
ಪ್ರಸ್ತುತ 35 ವಾರ್ಡ್ಗಳಿದ್ದು, 2001ರ ಜನಗಣತಿಯಂತೆ 1,13,039 ಜನಸಂಖ್ಯೆ
ಹೊಂದದೆ. 68.23 ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ. ಉಡುಪಿ ನಗರಸಭೆಯ ಕಾರ್ಯಾಲಯವು
ನಗರದ ಹೃದಯ ಭಾಗದಲ್ಲಿದೆ. ಐತಿಹಾಸಿಕವೂ
ಧಾರ್ಮಿಕವೂ ಆದ ಉಡುಪಿ ಶಿಕ್ಷಣ
ಕ್ಷೇತ್ರದಲ್ಲಿ ವಿಶ್ವಮಾನ್ಯತೆ ಹೊಂದಿದೆ.