Home

 

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011

 

----------------------------------------------------------------------------------------------------------------------------------------------------

ಶೃದ್ಧಾಂಜಲಿ

      ರಾಜಕೀಯ ವಲಯದಲ್ಲಿ ಶುದ್ಧಹಸ್ತದ ರಾಜಕಾರಣಿ ಎಂದೇ ಜನಜನಿತರಾಗಿದ್ದ ಡಾ| ವೇದವ್ಯಾಸ ಶ್ರೀನಿವಾಸ ಆಚಾರ್ಯ ಅಜಾತಶತ್ರು ಎಲ್ಲಾ ಮತ, ಧರ್ಮದವರು ಹಾಗೂ ಎಲ್ಲಾ ಪಕ್ಷಗಳು ಅದರದಿಂದ ಕಾಣುವ ಮಹಾನುಭಾವ, ಸರ್ವಧರ್ಮ ಸಮತಾವಾದಿ.  1967 ರಲ್ಲಿ ಜನಸಂಘದ ಮೂಲಕ ಜನತೆಯಲ್ಲಿಯೇ ಜನಾರ್ಧನನನ್ನು ಕಾಣುವ ಉದ್ದೇಶದಿಂದ ರಾಜಕೀಯ ಪ್ರವೇಶಸಿದ ಅವರು, ರಾಜ್ಯ ಕಂಡ ಅಪರೂಪದ ರಾಜತಾಂತ್ರಿಕ. ಪ್ರಸ್ತುತ ಉನ್ನತ ಶಿಕ್ಷಣ, ಸಾಂಖ್ಯಿಕ, ಮುಜರಾಯಿ ಇಲಾಖೆಗಳನ್ನು ನಿರ್ವಹಿಸುತ್ತಲೇ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಧುನಿಕ ಉಡುಪಿ ನಿರ್ಮಾಣಕ್ಕೆ ಅಪೂರ್ವ ಕೊಡುಗೆ ನೀಡಿದ ಅದ್ಭುತ ರಾಜಕಾರಣಿ.

           ವೃತಿಯಲ್ಲಿ ವೈದ್ಯರಾದ ಡಾ| ವಿ. ಎಸ್ ಆಚಾರ್ಯ, ಪ್ರವೃತ್ತಿಯಲ್ಲಿ ನುರಿತ ರಾಜಕಾರಣಿ. 1967 ರಲ್ಲಿ ಜನಸಂಘದ ಮುಖಾಂತರ ರಾಜಕೀಯ ಪ್ರವೇಶಿಸಿ , 1968 ರಲ್ಲಿ  ಉಡುಪಿ ಪುರಸಭೆಯಲ್ಲಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿ 28ರ ಹರೆಯದಲ್ಲೆ ಉಡುಪಿ ಪುರಸಭೆಯ ಅಧ್ಯಕ್ಷರಾಗಿ ರಾಜ್ಯದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷ ಎನಿಸಿಕೊಂಡು, ಸತತ 21-01-1969 ರಿಂದ 29-11-1975 ರವರೆಗೆ ಉಡುಪಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 
   

ಉಡುಪಿ ನಗರಸಭೆಯ ಮಾಹಿತಿ:-

  • ಉಡುಪಿ ನಗರಸಭೆಯು ರಾಜ್ಯದಲ್ಲಿನ  ಪುರಾತನ ನಗರಸಭೆಗಳಲ್ಲಿ ಒಂದಾಗಿದೆ. ಬ್ರಿಟಿಷ್ ಕಾಲದಲ್ಲಿಯೇ ನಗರಸಭೆ ರೂಪುಗೊಂಡಿತ್ತು.
  • 01-04-1935 ರಂದು ತಾಲೂಕು ಬೋರ್ಡ್ ವಿಸರ್ಜನೆಗೊಂಡು ಜಿಲ್ಲಾ ಬೋರ್ಡ್ ರಚನೆಯಾದ ನಂತರ ಉಡುಪಿಯ ರಸ್ತೆ ಬೀದಿದೀಪ, ಸ್ವಚ್ಛತೆಯ ದೃಷ್ಟಿಯಿಂದ ಶ್ರೀಕೃಷ್ಣ ದೇವಸ್ಥಾನದಿಂದಾಗಿ ಪ್ರಸಿದ್ಧ ಯಾತ್ರಾ ಸ್ಥಳವಾದ್ದರಿಂದ ಅಂದಿನ ಮದ್ರಾಸ್ ಸರ್ಕಾರ 01-11-1935 ರಿಂದ ನಗರಸಭೆ ರಚನೆಯ ಘೋಷಣೆಯನ್ನು ಪ್ರಕಟಿಸಿತು.
  • 01-11-1935 ರಂದು ಏಳು ಗ್ರಾಮಗಳ ಭಾಗಗಳನ್ನೊಳಗೊಂಡು ಸುಮಾರು 17,251 ಜನಸಂಖ್ಯೆಯೊಂದಿಗ 3.75 ಚದರ ಮೈಲು ಪ್ರದೇಶದಲ್ಲಿ ನಗರಸಭೆ ಅಸ್ತಿತ್ವಕ್ಕೆ ಬಂದಿತು.
  • ಪ್ರಥಮ ಚುನಾಯಿತ ಮಂಡಳಿ 31-08-1936 ರಂದು ಉಡುಪಿ ನಗರದ ಗಣ್ಯರು ಸುಪ್ರಸಿದ್ಧ ವಕೀಲರೂ ಆಗಿದ್ದ ಶ್ರೀ ಆರೂರು ಲಕ್ಷ್ಮೀನಾರಾಯಣ ರಾವ್ ರವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿತು.
  • ಪ್ರಸ್ತುತ 35 ವಾರ್ಡ್ ಗಳಿದ್ದು, 2001ರ ಜನಗಣತಿಯಂತೆ 1,13,039 ಜನಸಂಖ್ಯೆ ಹೊಂದದೆ. 69.28 ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ.
  • ಉಡುಪಿ ನಗರಸಭೆಯ ಕಾರ್ಯಾಲಯವು ನಗರದ ಹೃದಯ ಭಾಗದಲ್ಲಿದೆ. ಐತಿಹಾಸಿಕವೂ ಧಾರ್ಮಿಕವೂ ಆದ ಉಡುಪಿ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಮಾನ್ಯತೆ ಹೊಂದಿದೆ.

Brief Introduction of Udupi CMC:-

  • Town Municipal Council, Udupi came into existence in 1935 and was converted into City Municipal Council in the year 1995.
  • Udupi city is district headquarter for the district of same name.
  • Udupi is new district formed separated from Dakshina Kannada district in 1997.Udupi consist of 1,13,039 population according to the 2001 census has 69.28 Sq.km. area for it's municipal limit.
  • The well-established main office of Municipality is situated in K.M Marg at the heart of the city.

--------------------------------------------------------------------------------------------------------------------------

ಗಣಕೀಕರಣ ಯೋಜನೆಗಳು

ಜನನ-ಮರಣ(Birth and Death Online Application):  ಜನನ ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ಉಡುಪಿ ನಗರಸಭೆಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು. ಅಧಿಕೃತ ವೆಬ್ ಸೈಟ್ : www.udupicity.gov.in 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)):  ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 24 ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ. ಸಾರ್ವಜನಿಕರು ಪತ್ರ,ದೂರವಾಣಿ,ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು ಸಹಾಯವಾಣಿ: 0820-2593366  ಅಧಿಕೃತ ವೆಬ್ ಸೈಟ್ :www.udupicity.gov.in 

ಸ್ಥಳೀಯ ಸಂಸ್ಥೆಯ ವೆಬ್ ಸೈಟ್: ಉಡುಪಿ ನಗರಸಭೆಯ ಅಧಿಕೃತ ಅಂತರ್ಜಾಲ www.udupicity.gov.in.  ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.

ಆಸ್ತಿ ತೆರಿಗೆ ಯೋಜನೆ:    ಉಡುಪಿ ನಗರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಮಾಹಿತಿಯನ್ನು ಸರ್ವೇ ಮಾಡಿ ಗಣಕೀಕೃತಗೊಳಿಸಲಾಗಿದೆ.

       The Plastics which are considered as Banned by Ministry of Environment and forest, Govt. India(Plastic Waste(Handling and management ) Rules 2011) as follows.

This page is maintained by Venkataramanayya (Manager), CMC Udupi

Last Updated on 07/12/2012

No. Of Visitors :
Last Updated   : 21/02/2012  Release History
Release 2.0.0, Powered By Karnataka Municipal Data Society & maintained by Udupi CMC
This website can best viewed with the resolution 1024 * 768 using Internet Explorer 7.0 or above.
Valid CSS!